PRASHANTH. P. KHATAVAKAR

ಕಥೆ ಕವನ ನಗೆಹನಿ ಹಾಡುಗಳು
ಮನದಿ ಮೂಡಿದ ಸುಂದರ ಸಾಲುಗಳು

ಕಥೆ ಕವನ ನಗೆಹನಿ ಹಾಡುಗಳು
ಮನದಿ ಮೂಡಿದ ಸುಂದರ ಸಾಲುಗಳು
ಹೊಸ ವಿಷಯ ಬರೆವ ಹಂಬಲ 
ಪ್ರೀತಿಯ ದೇಗುಲದ ಕದ ತೆರೆಯುವ ಕಾಲ
ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ
ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ
ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ
ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ... :)
 
                                                                                                        By..   PRASHANTH. P. KHATAVAKAR

 

                ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

 

ಏ ಹುಡುಗಿಯೇ ಓ ಬೆಡಗಿಯೇ
ಸಂಗಾತಿಯೇ ಸ್ವಪ್ನಸುಂದರಿಯೇ
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಕನಸಲ್ಲಿ ಬರ್ತೀಯ ಮುತ್ತನ್ನು ಕೊಡ್ತಿಯ
ನಿದ್ದೆನ ಕೆಡಸ್ತೀಯ ಕಷ್ಟನ ಕೊಡ್ತಿಯ
ಯಾಕೋ ಏನೋ ನೀನೆ ಇಷ್ಟ ಆಗ್ತೀಯ
ಹೃದಯದಲ್ಲಿ ಆಸೆಯ ಹೆಚ್ಚು ಮಾಡ್ತೀಯ
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಕನಸಲ್ಲೂ ನೀನೆ ಮನಸ್ಸಲ್ಲೂ ನೀನೆ
ಎಲ್ಲೆಲ್ಲು ನೀನೆ ಹಿಂಗ್ಯಾಕೆ ಹೇಳೇ ಜಾಣೆ
ಸುಳ್ಳಲ್ಲ ನನ್ನ ಮಾತು ದೇವರಮೇಲಾಣೆ
ಈ ಹೃದಯದ ಮಾತನು ತಿಳಿಸುವ ದಾರಿಯ ನಾ ಕಾಣೆ
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ವಾರಕ್ಕೊಮ್ಮೆ ರಜೆಯ ದಿನದಲ್ಲಿ
ನಾನು ನೋಡುವ ಕನ್ನಡ ಸಿನೆಮಾದಲ್ಲಿ
ಪರದೆಯ ಮೇಲೆ ನೀನೆ ನಾಯಕಿಯಾಗಿರುವೆ
ಹಾಡನು ಹಾಡಿ ಡ್ಯಾನ್ಸ್ ಮಾಡಿ ಮನಸ್ಸನ್ನು ಕದ್ದಿರುವೆ
ನೀನು ನಡೆಯುವ ಸ್ಟೈಲಿಗೆ ನಿನ್ನ ಸ್ಮೈಲಿಗೆ ನಾನು ಸೋತಿರುವೆ
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಏಕಾಂಗಿಯಾಗಿದ್ದೆ ನಾನು
ಸಂಗಾತಿಯಾಗಿ ಬಂದೆ ನೀನು
ಸಂತೋಷವಾಗಿದ್ದೆ ನಾನು
ಪ್ರೀತ್ಸೋದನ್ನ ಹೇಳಿ ಕೊಟ್ಟೆ ನೀನು
ಕನಸಲ್ಲಿ ಬರೋದನ್ನೇ ಪ್ರೀತಿ ಅಂತಾರೇನು
ಮನಸಲ್ಲಿ ಇರೋದನ್ನೇ ಹೇಳ್ತೀನಿ ನಾನು
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ನಿನ್ನಾ ಪ್ರೀತಿಸುವೆ
ನಿನಗಾಗಿ ಕಾದಿರುವೆ
ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

                            By..   PRASHANTH. P. KHATAVAKAR

              ನನ್ನ ಸ್ನೇಹದ ತೋಟದಲ್ಲಿ ಅರಳಿದ ಗುಲಾಬಿ ನೀನು.

 

ನನ್ನ ಸ್ನೇಹದ ತೋಟದಲ್ಲಿ ಅರಳಿದ ಗುಲಾಬಿ ನೀನು.
ನಿನ್ನ ಸುವಾಸನೆಯ ಕಂಪು ಹರಡಿದೆ ನನ್ನ ಮನದಲ್ಲಿ.
ಎಂದು ನೀನು ನನ್ನ ಬಾಳಿನಲ್ಲಿ ಬಂದೆಯೋ ಅನ್ನೋದು,
ತಿಳಿಯದ ಹಾಡಾಗಿ ಉಳಿದಿದೆ ನನ್ನೆದೆಯ ಗೂಡಲ್ಲಿ.

ಹೇಗೆ ಮರೆಯಲಿ ನಿನ್ನ ನಾನು. ನಿನ್ನ ಆ ಮಾತುಗಳನ್ನು.
ಒಮ್ಮೊಮ್ಮೆ ಕನಸಲ್ಲಿ ಬಂದರು ನೀನು ಕಾಣುವುದಿಲ್ಲ.
ನಿನ್ನ ಆ ಸವಿ ಮಾತುಗಳ ನೆನಪೇ ನನ್ನ ಕನಸಲ್ಲಿ,
ಕಾಡುತ್ತದೆ.. ಮಾತನಾಡುತ್ತದೆ.. ಹಾಡನ್ನು ಹೇಳಿ,
ಮುಂಜಾನೆಯ ಮಸುಕಿನಲ್ಲಿ ಮಾಯವಾಗಿ ಹೋಗುತ್ತದೆ.
ಇದು ಯಾಕೆ ಹೀಗೆ ಅನ್ನೋದು ನನ್ನ ಮನಸನ್ನು ಕೇಳಿದೆ.
ಮನಸ್ಸು ಹೇಳಿತು ಅದು ಸ್ವಚ್ಛ ನಿರ್ಮಲ ಸ್ನೇಹದ ನೆನಪು.
ಆ ನೆನಪುಗಳು ನಿನ್ನಲ್ಲಿಯು ಇದ್ದರೆ, ನನ್ನ ಮರೆಯದಿರು.
ಎಂದೆಂದಿಗೂ ನಾ ನಿನ್ನ ಆಪ್ತಮಿತ್ರ.. ನಿನ್ನ ಬಾಳಿನಲ್ಲಿ,
ಮರೆಯಲಾಗದ ಸವಿಯಾದ ನೆನಪು ನಾನೆಂದಿಗೂ,
ನಿನ್ನ ಹೃದಯಕ್ಕೆ ಹತ್ತಿರ. ದೂರ ಇದ್ದರು ಮನಸ್ಸು
ಮಾತ್ರ ನಿನ್ನ ಹತ್ತಿರ. ನಿನ್ನ ಎಲ್ಲ ಪ್ರಶ್ನೆಗಳಿಗೆ,
ಈ ಕವಿತೆಯೆ ನನ್ನ ಎದೆ ತುಂಬಿ ಬಂದ ಉತ್ತರ.

                                                                                         By..   PRASHANTH. P. KHATAVAKAR

                         ಮನಸ್ಸು ಹಾಡಿತು ಮೌನದ ಕವಿತೆ

 

ಮನಸ್ಸು ಹಾಡಿತು ಮೌನದ ಕವಿತೆ
ಉಸಿರು ನಿಂತು ಹೋಯಿತು
ಜೀವ ಹಾರಿ ಹಕ್ಕಿಯಂತೆ ಕೂಗಿತು
ಎಲ್ಲಿರುವೆ ಮನಸ್ಸೇ.. ಬರಲಿಲ್ಲ ನೀನು
ಓ ನನ್ನ ಕನಸೇ.. ಬರಲಿಲ್ಲ ನೀನು
ಬಂದರು ಕಾಣಲಿಲ್ಲ. ಕಂಡರೂ ಮಾತು
ಇಲ್ಲ. ಮೌನದ ಹಾಡೇ ಎಲ್ಲ. ಏಕೆ ಹೀಗೆ ?
ಮಾತನಾಡು ಮಗುವಿನ ಹಾಗೆ. ಮನಸ್ಸು
ಹಾಡು ನೀನು ಕೋಗಿಲೆ ಹಾಗೆ. ಕನಸು
ಇದು. ನನ್ನ ಮನಸ್ಸು ಹೇಳಿದ ಕವಿತೆ ಇದು.

                                                                                         By..   PRASHANTH. P. KHATAVAKAR

                     ** OM SHRI GANESHAYA NAMHA **

 

** OM SHRI GANESHAYA NAMHA **
jai ganesha... jai ganesh... deva..
maatha parvathi aur pitha mahadeva....
..............................
۞"PRASHANTH"۞
..............................
__________________00000
________________(0000000)
_________00____(000000000)____00
_________0000__|____W____|__0000
_________00000_|_<>___<>_|_00000
_________000000|_________|000000
__________00000\_(______)_/00000
___000_________//_\____(__\
__00000____000000__\___\_____...
__00000___000000000_^.__^..*^_._^*___00
___0000__00000000000__^.___.*^_^*^__0000
__________000000000000/_^^^00000_____00
___00000__00000000000/00000000000__000000
_00000000__000000000/00000000000____0000
0000000000___000000/00000000000___00000000
00000000000____000/00*0000000___000000000000
_000000000000_____00000000____00000000000000
__000000000000__00____0000000_0000000000000
____000000000__00000___000000_000000000000
______000000_00000000___00000_0000000000
______________000000_____0

                                                                                         By..   PRASHANTH. P. KHATAVAKAR

                       ಸ್ನೇಹದಾ ಕಾರಂಜಿ

 

ನಿನ್ನ ಕವನಗಳು, ಮನಸ್ಸಿಗೆ ನಾಟುವ ಬಾಣಗಳು.
ಎದೆಗೆ ಸಿಲುಕಿ ಸ್ನೇಹದಾ ಕಾರಂಜಿ ಉಕ್ಕಿಸುವ ಚಿಲುಮೆಗಳು.
ಅಂದು ಎದೆಯ ಬಗೆದು ತೋರಿಸಿದನು ಶ್ರೀ ರಾಮನನ್ನು ,
ಆ ಕೆಸರಿನಂದನ, ಪವನಪುತ್ತ್ರ ವೀರ ಹನುಮನು.
ಇಂದು ಎದೆ ತುಂಬಿ ಬರೆದಿರುವೆ ನಮ್ಮಿಬ್ಬರ ಸ್ನೇಹ ಕವನವನ್ನು .
ಒಮ್ಮೆ ನಾನು ರಾಮನಾದರೆ - ನೀನು ಹನುಮನು , ಇನ್ನೊಮ್ಮೆ
ನೀನು ರಾಮನಾದರೆ - ನಾನು ಹನುಮನು. ಜೈ ಶ್ರೀ ರಾಮ್.

                                                                                          By..   PRASHANTH. P. KHATAVAKAR

          ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

 

ಸ್ನೇಹದ ಹೆಸರಲ್ಲಿ ಸನಿಹಕೆ ಬಂದವಳೇ

ಮೌನದಿ ಮನಸ್ಸಲ್ಲಿ ಹೃದಯವ ಗೆದ್ದವಳೇ

ಸುಮಧುರ ಆಸೆಗಳ ಚಿತ್ರವ ಬರೆದವಳೇ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ

 

ಕನಸಿನ ಲೋಕದಲ್ಲಿ ಮಹರಾಣಿಯು ನೀನೇ

ನಿನ್ನ ಕನಸಿನ ಕೋಟೆಯ ಆಳುವ ಮಹರಾಜನು ನಾನೇ

ಪ್ರೇಮರಾಜ್ಯವ ಕಟ್ಟಲು ಬೇಗನೆ ಕೊಡು ಹಸಿರು ನಿಶಾನೇ

ಕನಸ ಕಾಣುತಲೇ ಕಳೆದಿರುವೆ ನನ್ನ ಅರ್ಧ ಜೀವನವನ್ನೇ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ

 

ಮುದ್ದಾದ ಮೊಗದವಳೇ, ಹಾಲಿನ ಬಣ್ಣದವಳೇ

ಬಳ್ಳಿಯಂತೆ ಬಳುಕುವವಳೇ, ಮಿಂಚಿನಂತೆ ಮಿಂಚುವವಳೇ

ಬೊಂಬೆಯಂತ ಮೈಮಾಟ, ಬಲು ಸುಂದರ ನಿನ್ನ ಸೊಂಟ

ನನ್ನ ಜೊತೆ ಆಡಬೇಡ ಆಟ, ನಾನು ಸ್ವಲ್ಪ ತುಂಟ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ

                                                                                          By..   PRASHANTH. P. KHATAVAKAR